Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಕ್ಕಳ ಮತ್ತು ಕೌಟುಂಬಿಕ ಚಲನಚಿತ್ರ ವಿಭಾಗದಲ್ಲಿ “ಬಾಫ್ಟಾ” ಪ್ರಶಸ್ತಿ ಗೆದ್ದ “ಬೂಂಗ್” ಚಿತ್ರ ತಂಡವನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದ್ದಾರೆ, “ಇದು ಮಣಿಪುರ ಮತ್ತು ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ” ಎಂದು ಅವರು ಹೇಳಿದ್ದಾರೆ


ಇ.ಇ. ಬಿ.ಎ.ಎಫ್.ಟಿ.ಎ. ಚಲನಚಿತ್ರ ಪ್ರಶಸ್ತಿಗಳಲ್ಲಿ ಮಕ್ಕಳ ಮತ್ತು ಕೌಟುಂಬಿಕ ಚಲನಚಿತ್ರ ವಿಭಾಗದಲ್ಲಿ “ಬೂಂಗ್” ಚಲನಚಿತ್ರವನ್ನು ವಿಜೇತ ಎಂದು ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್ (ಬಿ.ಎ.ಎಫ್.ಟಿ.ಎ) ಘೋಷಿಸಿದೆ.

ಇ.ಇ. ಬಿ.ಎ.ಎಫ್.ಟಿ.ಎ. ಚಲನಚಿತ್ರ ಪ್ರಶಸ್ತಿಗಳಲ್ಲಿ ಮಕ್ಕಳ ಮತ್ತು ಕೌಟುಂಬಿಕ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಕ್ಕಾಗಿ “ಬೂಂಗ್” ಚಲನಚಿತ್ರದೊಂದಿಗೆ ಸಂಬಂಧ ಹೊಂದಿದ್ದ ಎಲ್ಲರಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಾಧನೆಯು ವಿಶೇಷವಾಗಿ ಮಣಿಪುರಕ್ಕೆ ಅಪಾರ ಸಂತೋಷದ ಕ್ಷಣವಾಗಿದೆ. ಈ ಪ್ರಶಸ್ತಿಯು ರಾಷ್ಟ್ರದಲ್ಲಿ ಪ್ರಸ್ತುತವಿರುವ ಅಗಾಧ ಸೃಜನಶೀಲ ಪ್ರತಿಭೆಯನ್ನು ಉಲ್ಲೇಖಿಸುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.  

ಮೇಲೆ ತಿಳಿಸಿದ ಪ್ರಶಸ್ತಿ ಘೋಷಣೆಯ ಕುರಿತು “ಬಾಫ್ಟಾ”ದ  “ಎಕ್ಸ್” ತಾಣದ ಸಂದೇಶಕ್ಕೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ;

“ಈ ಚಿತ್ರದೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ಅಭಿನಂದನೆಗಳು. ಇದು ನಿಜಕ್ಕೂ ಅಪಾರ ಸಂತೋಷದ ಕ್ಷಣ, ವಿಶೇಷವಾಗಿ ಮಣಿಪುರಕ್ಕೆ. ಇದು ನಮ್ಮ ರಾಷ್ಟ್ರದಲ್ಲಿರುವ ಅಪಾರ ಸೃಜನಶೀಲ ಪ್ರತಿಭೆಯನ್ನು ಉಲ್ಲೇಖಿಸುತ್ತದೆ.” 

 

*****